Karnataka Assembly elections a few months away. How Rahul Gandhi look by Karnataka's common man? During AICC president Rahul Gandhi tour of Karnataka visited various places. Here is an analysis of common man's eye.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸುತ್ತು ಹೊಡೆದಿದ್ದಾರೆ. ಭೋರ್ಗರೆವ ಭಾಷಣ ಮಾಡಿದ್ದಾರೆ. ಮೋದಿ ಅವರನ್ನು ಹಿಗ್ಗಾಮುಗ್ಗಾ ತೆಗಳಿದ್ದಾರೆ. ಬಿಜೆಪಿಯ ರಾಜ್ಯ ನಾಯಕರನ್ನು ಎಗಾದಿಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಈ ಕಾರಣಕ್ಕೆ ಅವರು ನಮಗೆ ಅಂದರೆ ಕನ್ನಡಿಗರಿಗೆ ಹತ್ತಿರವಾದರಾ? ಹತ್ತಿರಾ ಆಗ್ತಾರಾ? ಎಂಬ ಪ್ರಶ್ನೆ ಕೇಳಿಕೊಂಡರೆ ಉತ್ತರ ಸಿಗಲ್ಲ. ಆದರೆ, ರಾಹುಲ್ ಗಾಂಧಿ ಹುಲಿಗೆಮ್ಮ ದೇವಸ್ಥಾನಕ್ಕೆ ಹೋದರು. ಬೀದರ್ ನಲ್ಲಿ ಬಸವನ ಬಾಗೇವಾಡಿಯ ಅನುಭವ ಮಂಟಪಕ್ಕೆ ಭೇಟಿ ನೀಡಿದರು. ಮೌಲಾ ಸಾಬ್ ಅವರ ದುಕಾನಿನಲ್ಲಿ ಮಿರ್ಚಿ ಬಜ್ಜಿ- ಮಂಡಕ್ಕಿ ಒಗ್ಗರಣೆ ರುಚಿ ನೋಡಿದರು. ತಮ್ಮದೇ ಪಕ್ಷದ ಅತಿರಥ- ಮಹಾರಥ ರಾಜ್ಯ ನಾಯಕರಿಗೆ ತಾವೇ ಬೋಂಡ-ಬಜ್ಜಿ ಹಂಚಿದರು. ಇಂಥ ನಡವಳಿಕೆ ಸಹಜವಾಗಿ ಒಬ್ಬ ವ್ಯಕ್ತಿಯ ಬಗ್ಗೆ ಕುತೂಹಲ ಹುಟ್ಟು ಹಾಕುತ್ತದೆ.